ಚಿತ್ರ: ನಾ ಮೆಚ್ಚಿದ ಹುಡುಗ
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಗಾಯಕರು: ಎಸ್.ಜಾನಕಿ ಮತ್ತು ಪಿ.ಬಿ.ಶ್ರೀನಿವಾಸ್
ಸಂಗೀತ: ವಿಜಯಭಾಸ್ಕರ್

ಬೆಳದಿಂಗಳಿನಾ ನೊರೆ ಹಾಲು ಕೊಡದಲಿ ತುಂಬಿ ತಂದವಳೇ
ಹೊಳೆಯುವ ತಾರೆಯ ಹೊಂಬೆಳಕೂ ಕಣ್ಣಲಿ ಸೂಸಿ ನಿಂದವಳೇ
ಬಾ ಬಾರೆ 
ಬಾ ಬಾರೆ ಓ ಗೆಳತೀ ಜೀವನ ಸಂಗಾತಿ....

ಮಲ್ಲಿಗೆ ಹಂಬಿನ ತೋಟದಲೀ ತಂಬೆಲರಂತೆ ಬಂದವನೇ
ಅರಿಯದ ಹೆಣ್ಣಿನ ಹೃದಯದಲೀ ಸುಮಧುರ ನೋವನು ತಂದವನೇ
ಬಾ ಬಾರೋ 
ಬಾ ಬಾರೋ ಓ ಗೆಳೆಯಾ ಜೀವನ ಸಂಗಾತಿ.......||ಪಲ್ಲವಿ||

ವಸಂತ ಕಾಲದ ಪ್ರಥಮ ಕುಸುಮವೋ ಪ್ರೇಮಪಲ್ಲವಿಯೋ ||೨||
ಅನುರಾಗಾಮೃತ ಝರಿಯಲಿ ಮಿಂದಾ ಚಲುವ ಚೆನ್ನಿಗನೋ
ಹೂವಿನ ತೇರಲಿ ಮೆರೆಯುತ ಬಂದಾ ದೇವಕನ್ನಿಕೆಯೋ....||ಮಲ್ಲಿಗೆ ಹಂಬಿನ ತೋಟದಲೀ||

ಆಸೆಗಳೆಂಬ ಕಾರಂಜಿಗಳೂ ಹೊಮ್ಮುವ ನಂದನವೋ||೨||
ನಿನ್ನಾ ಕಿರುನಗೆಯೆಂಬ ಹೂವುಗಳಿಂದ ನಲಿಯುವ ಹೂಬನವೋ
ಪ್ರಣಯಿಗಳಾ ಮಧುರವಿಹಾರವೋ ಪ್ರೇಮಕಾಶ್ಮೀರವೋ....||ಬೆಳದಿಂಗಳಿನಾ ನೊರೆಹಾಲು||

category: ಕನ್ನಡ ಚಿತ್ರಸಾಹಿತ್ಯ
category: ನಾ ಮೆಚ್ಚಿದ ಹುಡುಗ ಚಿತ್ರ
category: ಆರ್.ಎನ್.ಜಯಗೋಪಾಲ್ ಸಾಹಿತ್ಯ
category: ಪಿ.ಬಿ.ಶ್ರೀನಿವಾಸ್ ಗಾಯನ
category: ಎಸ್.ಜಾನಕಿ ಗಾಯನ